ಹೀಗೆ ದಿನೇ ದಿನೇ ಮಾಡುತ್ತಿದ್ದಳು. ಇದರಿಂದ ಪೌಲನಿಗೆ ಬಹಳ ಬೇಸರವಾಯಿತು. ಅವಳ ಕಡೆಗೆ ತಿರುಗಿ, ಅವಳನ್ನು ಹಿಡಿದಿದ್ದ ದೆವ್ವಕ್ಕೆ, “ಇವಳನ್ನು ಬಿಟ್ಟು ತೊಲಗು ಎಂದು ಯೇಸುಕ್ರಿಸ್ತರ ನಾಮದಲ್ಲಿ ನಿನಗೆ ಆಜ್ಞಾಪಿಸುತ್ತೇನೆ,” ಎಂದನು. ಆ ಕ್ಷಣವೇ ಅದು ಅವಳನ್ನು ಬಿಟ್ಟುಹೋಯಿತು.