ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕ್ಕೆಬೇಕಾದ ದ್ರವ್ಯಸಹಾಯ ನೀಡಿದರು. ತಿರ್ಷಾತಾ ಎನಿಸಿಕೊಳ್ಳುವ ರಾಜ್ಯಪಾಲ ಭಂಡಾರಕ್ಕೆ ಕೊಟ್ಟದ್ದು - ಎಂಟು ಕಿಲೋಗ್ರಾಂ ಬಂಗಾರ. ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.